ಹೆಬ್ರಿ: ಚಾರ ಜವಾಹರ್ ನವೋದಯ ವಿದ್ಯಾಲಯ ಶೇ.100 ಫಲಿತಾಂಶ

ಹೆಬ್ರಿ: ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ ಚಾರ ಉಡುಪಿ ಜಿಲ್ಲೆ ಇಲ್ಲಿನ ಹತ್ತನೇ ತರಗತಿ ಸಿ.ಬಿ.ಎಸ್.ಇಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ, 54 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡು ಶೇ.100 ಫಲಿತಾಂಶ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ. ವಿಂಶತಿ ಎಮ್ ಪುತ್ತು (96.60%) ಮೇಘನಾ(95.20%),ಧನ್ವಿನ್ ಜಿ. ಶೆಟ್ಟಿ (94.80%)ಮಾನ್ಯ ಯು. ಶೆಟ್ಟಿ (93.20%),ಅರ್ಜುನ್ ವಿ. ಶೆಟ್ಟಿ (93.00%) ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಮೂಡಿ ಬಂದಿದ್ದಾರೆ.