ರಸ್ತೆಬದಿಯ ಹುಲ್ಲು ನೀಲಾವರ ಗೋಶಾಲೆಗೆ ಹಸ್ತಾಂತರ: ಉಡುಪಿ ಶಾಸಕರ ಕಾರ್ಯಕ್ಕೆ ಪೇಜಾವರ ಶ್ರೀ ಶ್ಲಾಘನೆ

ಉಡುಪಿ: ಶಾಸಕ ಕೆ. ರಘುಪತಿ ಭಟ್ಟರ ವಿಶೇಷ ಮುತುವರ್ಜಿ ಮತ್ತು ಸೂಚನೆಯನ್ವಯ ಉಡುಪಿ ನಗರಸಭೆಯು ನಗರದ ವಿವಿಧೆಡೆ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನ್ನು ಕತ್ತರಿಸಿ ನೀಲಾವರ ಗೋಶಾಲೆಗೆ ಹಸ್ತಾಂತರಿಸಿದೆ. ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಪ್ರಯತ್ನದಿಂದ ಕಳೆದ ಮೂರು ದಿನಗಳಿಂದ 5 ದೊಡ್ಡ ಟಿಪ್ಪರ್, 3 ಮಿನಿ ಟಿಪ್ಪರ್ ಮತ್ತು ಒಂದು ಸಣ್ಣ ರಿಕ್ಷಾ ಟೆಂಪೋದಲ್ಲಿ ಹುಲ್ಲನ್ನು ಗೋಶಾಲೆಗೆ ನೀಡಲಾಗಿದೆ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಪೇಜಾವರ ಮಠದ […]