ಡಿ. 8 ರಂದು ಟ್ರಿಪಲ್ ತಲಾಕ್ ಚಲನ ಚಿತ್ರದ ಮೊದಲ ಪ್ರದರ್ಶನ

ಉಡುಪಿ: ಗುಲ್ವಾಡಿ ಟಾಕೀಸ್ ಬ್ಯಾನರ್ನಡಿ ನಿರ್ಮಾಣಗೊಂಡ ಯಾಕುಬ್ ಖಾದರ್ ಗುಲ್ವಾಡಿ ಮೊದಲ ಬಾರಿಗೆ ನಿರ್ದೇಶಿಸಿದ ‘ಟ್ರಿಪಲ್ ತಲಾಕ್’ ಬ್ಯಾರಿ ಭಾಷೆಯ ಚಲನಚಿತ್ರದ ಮೊದಲ ಪ್ರದರ್ಶನ ಡಿ. 8ರಂದು ಇಂಗ್ಲೆಂಡಿನ ನೈರುತ್ಯ ಕರಾವಳಿಯ ಬ್ರಿಸ್ಟನ್ನ ಸ್ಕಾಟ್ ಚಿತ್ರಮಂದಿರದಲ್ಲಿ ನಡೆಯಲಿದೆ. ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯಾಕುಬ್ ಖಾದರ್ ಗುಲ್ವಾಡಿ, ತ್ರಿವಳಿ ತಲಾಕ್ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ಆಧರಿಸಿ, ಚಿತ್ರದ ಕಥೆಯನ್ನು ಹೆಣೆಯಲಾಗಿದೆ. 90 ನಿಮಿಷಗಳ ಅವಧಿಯ ಈ ಚಿತ್ರವನ್ನು ಕುಂದಾಪುರ, […]