ಉಡುಪಿ ಜಿಲ್ಲೆ: ಅತಿಥಿ ಉಪನ್ಯಾಸಕರ ವೇತನ ವಿತರಣೆಯಲ್ಲಿ ಪ್ರಾಂಶುಪಾಲರ ತಾರತಮ್ಯ!:ಆರೋಪ

ಉಡುಪಿ-ಕಾರ್ಕಳ: ಪದವಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಡಿ ನೇಮಕರಾದ ಅತಿಥಿ ಉಪನ್ಯಾಸಕರಿಗೆ ಈಗಾಗಲೇ ಸರಕಾರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅನುದಾನ ಬಿಡುಗಡೆ ಮಾಡಿದ್ದು ಅತಿಥಿ ಉಪನ್ಯಾಸಕರಿಗೆ ವಿತರಿಸುವಂತೆ ಪ್ರಕಟಣೆ ಹೊರಡಿಸಿದೆ. ಆದರೆ ಉಡುಪಿ ಜಿಲ್ಲೆಯ ಕೆಲವು ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷಾ ಕರ್ತವ್ಯ ಮಾಡಿಲ್ಲ ಎಂದು ಕರ್ತವ್ಯ ನಿರ್ವಹಿಸದ ಅತಿಥಿ ಉಪನ್ಯಾಸಕರನ್ನು ನಿಂದಿಸುತ್ತಾ ಪರೀಕ್ಷಾ ಕರ್ತವ್ಯ ನಿರ್ವಹಿಸದ ತಮಗೆ ಬೇಕಾದ ಅತಿಥಿ […]