ಸಂಘಟನೆಯಲ್ಲಿ ಬಲವಿದೆ ಎಂದು ಸಾಧಿಸಿ ತೋರಿದ ಸ್ವರ್ಣೋದ್ಯಮ ಸಂಘಟನಾ ಚತುರ ನೋವೆಲ್ಟಿ ಸಂಸ್ಥೆಯ ಜಿ.ಜಯ ಆಚಾರ್ಯ

ನೋವೆಲ್ಟಿ ಸ್ಟೋರ್ಸ್ ನ ಸಂಸ್ಥಾಪಕ ಜಿ. ಅನಂತಕೃಷ್ಣ ಆಚಾರ್ಯರ 4 ನೇ ಪುತ್ರ ಜಯ ಆಚಾರ್ಯರು ಪ್ರಾರಂಭದಲ್ಲಿ ಚಿತ್ರರಂಗದತ್ತ ಒಲವು ಹೊಂದಿದ್ದರು. ಬೆಂಗಳೂರಿನಲ್ಲಿರುವ ಆರ್. ನಾಗೇಂದ್ರರಾಯರ ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ, ಡಿ.ಎಫ್.ಟಿ ಕೋರ್ಸ್ ಪೂರೈಸಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವವಿದೆ. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ನಟಿಸಿಯೂ ಇದ್ದಾರೆ. ತದನಂತರ ಜಿ.ವಿ.ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲೂ ಪರ್ಷಿಯನ್ ದೊರೆಯ ಪಾತ್ರದಲ್ಲಿ […]