ಉಚಿತ ವಿದ್ಯುತ್ ಯೋಜನೆ ನೋಂದಣಿಗೆ ಸರ್ವರ್ ಕಾಟ; ನಾಲ್ಕು ಜಿಲ್ಲೆಗಳಿಂದ 21160 ಅರ್ಜಿ ಸ್ವೀಕಾರ

ಮಂಗಳೂರು/ ಉಡುಪಿ: ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ 200 ಉಚಿತ ವಿದ್ಯುತ್ ಯೋಜನೆ ನೋಂದಣಿಯ ಎರಡನೇ ದಿನ ಅವಿಭಜಿತ ದ.ಕ ಜಿಲ್ಲೆಯಲ್ಲಿ ಜನರು ಸರ್ವರ್ ಸಮಸ್ಯೆ ಮತ್ತು ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸಿದರು. ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದರೂ ಮಧ್ಯಾಹ್ನದ ವೇಳೆಗೆ ಸರ್ವರ್ ಸಮಸ್ಯೆಯಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ಮಂಗಳೂರು ವನ್, ಗ್ರಾಮ ವನ್ ನ ಎಲ್ಲಾ ಕೇಂದ್ರಗಳು, ಮೆಸ್ಕಾಂ ಕಚೇರಿಗಳು,ಇಂದಿರಾ ಸೇವಾ ಕೌಂಟರ್‌ಗಳು ಎಲ್ಲೆಲ್ಲೂ ಸರ್ವರ್ ಸಮಸ್ಯೆ ತಲೆದೋರಿದೆ. ಸೋಮವಾರ ಸಂಜೆಯವರೆಗೆ ಮೆಸ್ಕಾಂ […]

ಅಮೃತ ಜ್ಯೋತಿ ಯೋಜನೆ: ಪ.ಜಾ/ಪ.ಪಂ ಬಿಪಿಎಲ್ ಕುಟುಂಬಗಳು 75 ಯೂನಿಟ್‌ ಉಚಿತ ವಿದ್ಯುತ್ ಗಾಗಿ ದಾಖಲೆ ಸಲ್ಲಿಸಿ

ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಗ್ಯಜ್ಯೋತಿ /ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಅಮೃತ ಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದ್ದು, ಫಲಾನುಭವಿಗಳಿಗೆ ಮಾಸಿಕ 75 ಯೂನಿಟ್‌ವರೆಗೆ ಮಾತ್ರ ಬಳಕೆಯ ವಿದ್ಯುತ್ […]