ದಟ್ಟ ಕಾಡಿನಲ್ಲಿ “ಗೊರಂಕ್’ ಎಂಬ ಶಬ್ಧ ಕೇಳಿದಾಗ: ಸಂದೇಶ್ ಸಾಲ್ಯಾನ್ ಬರೆದ ಹಂಟಿಂಗ್ ಪ್ರಸಂಗ

ಶಿಕಾರಿಗೆ ಹೊರಟವರನ್ನು ನೋಡುವಾಗ ನನಗೆ ಅದೆಂಥದೋ ಖುಷಿ-ಕುತೂಹಲ. ಕೇಪಿನ ಕೋವಿಯ ನಳಿಕೆಗೆ ತೆಂಗಿನ ಒಣಸಿಪ್ಪೆಯ ನಾರಿನ ಜತೆಗೆ ಗುಂಡುಗಳನ್ನು ತುಂಬಿ ಕಬ್ಬಿಣದ ಸರಳಿನಿಂದ ಒಳಗೆ ತಳ್ಳುವ ಪ್ರಕ್ರಿಯೆಯಲ್ಲಿ ಬೇಟೆಗಾರನಲ್ಲಿ ಕಂಡುಬರುವ ತನ್ಮಯತೆ ಬಹಳ ಸುಂದರವಾಗಿರುತ್ತದೆ. ಭರ್ಜರಿ ಊಟದ ಬಳಿಕ ತಾಂಬೂಲ ಹಾಕಿಕೊಳ್ಳುವವರ ಹಾಗೆ. ಸಾಮಾನ್ಯವಾಗಿ ಬೇಟೆಗಾರರು ಬೇರೆಯವರ ಕೈಗೆ ತಮ್ಮ ಕೋವಿಯನ್ನು ಕೊಡುವುದಿಲ್ಲ. ಆದರೂ ನನ್ನ ಕುತೂಹಲ ನೋಡಿ ನನ್ನ ಪರಿಚಯಸ್ಥರೊಬ್ಬರು ನನ್ನ ಕೈಗೆ ಖಾಲಿ ಕೋವಿ ಕೊಟ್ಟಿದ್ದರು. ಬಹಳ ಖುಷಿಯಿಂದ ಎತ್ತಿಕೊಂಡು, ಸುಮ್ಮನೆ ಒಂದೆಡೆ ಗುರಿ […]