ನೀವೆಂದಾದರೂ ‘ರೋಬೋ ಸಪ್ಲಾಯರ್’ ನೋಡಿದ್ದೀರಾ? ಮಂಗಳೂರಿನ ಈ ಹೋಟೆಲ್ ನಲ್ಲಿದೆ ‘ರೋಬೋ ಸಪ್ಲಾಯರ್’

ತಂತ್ರಜ್ಞಾನದಿಂದ ಹೋಟೆಲ್ ಸೇವೆಗೆ ಹೊಸ ರೂಪ ಸಿಕ್ಕಿದ್ದು, ಮಂಗಳೂರಿನಲ್ಲಿ ಇದರ ಪ್ರಯೋಗ ನಡೆದಿದೆ. ನಗರದ ಕೆ ಎಸ್ ರಾವ್ ರಸ್ತೆಯಲ್ಲಿರುವ ಹೋಟೆಲ್‌ ಒಂದರಲ್ಲಿ ರೋಬೋ ಸಪ್ಲಾಯರ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ. 35 ಟೇಬಲ್‌ಗಳಿಗೆ ರೋಬೋ ಸೇವೆ ಕೆ ಎಸ್ ರಾವ್ ರಸ್ತೆಯಲ್ಲಿರುವ ಪಾಕಶಾಲಾ ಹೋಟೆಲ್‌ ನಲ್ಲಿ ಸುಮಾರು 35 ಟೇಬಲ್‌ಗಳಿದ್ದು, ಅವುಗಳಲ್ಲಿ ಕೆಲವು ಟೇಬಲ್‌ಗಳಿಗೆ ರೋಬೋ ಮೂಲಕ ಆಹಾರ ಮತ್ತು ಪಾನೀಯಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಆಹಾರವನ್ನು ರೋಬೋನ ರ್ಯಾಕ್‌ನಲ್ಲಿ ಇಟ್ಟು, […]