ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆ ಪರವಾನಿಗೆ: ಮೋಟಾರೀಕೃತ ನಾಡದೋಣಿಗಳ ಭೌತಿಕ ತಪಾಸಣೆ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್‌ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳ ಭೌತಿಕ ಪರಿಶೀಲನೆ ನಡೆಸಿ, ಪರವಾನಿಗೆಯನ್ನು ದೋಣಿ ಮಾಲಕರಿಗೆ ನೀಡಲಾಗುವುದು. ಮೋಟಾರೀಕೃತ ನಾಡದೋಣಿಗಳ ಮೀನುಗಾರಿಕಾ ಸೀಮೆ ಎಣ್ಣೆ ರಹದಾರಿ ನವೀಕರಣ ಹಾಗೂ ಹೊಸದಾಗಿರುವ ದೋಣಿಗಳಿಗೆ ಸೀಮೆಎಣ್ಣೆ ಪೂರೈಸುವ ಸಂಬಂಧ ಪರವಾನಿಗೆಯನ್ನು ನೀಡಲು ಅವರ ದೋಣಿಗಳನ್ನು ಭೌತಿಕ ತಪಾಸಣೆಗೆ ಒಳಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 23 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ […]