ಮಲ್ಪೆ: ಮೀನುಗಾರರ ಉತ್ಪಾದಕ ಕಂಪನಿಯ ಮೀನಿನ ಉಪ್ಪಿನಕಾಯಿ, ಮೀನಿನ ಮಸಾಲೆಗಳ ವ್ಯಾಪಾರ ಮಳಿಗೆ ಮತ್ತು ಉತ್ಪಾದನಾ ಘಟಕದ ಶುಭಾರಂಭ
ಮಲ್ಪೆ: ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇದರ ಸಹಯೋಗದಲ್ಲಿ ಪ್ರಾರಂಭಗೊಂಡಿರುವ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಹೊಚ್ಚ ಹೊಸ ಮಾರಾಟ ಮಳಿಗೆ ಮತ್ತು ಉತ್ಪಾದನಾ ಘಟಕವು ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಸಂಕೀರ್ಣದ ನೆಲ ಮಹಡಿಯಲ್ಲಿ, ಸೆ. 29 ರಂದು ಶಾಸಕ ಯಶ್ ಪಾಲ್ ಎ ಸುವರ್ಣ ಇವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಅವರು, ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಎಲ್ಲಾ ಉತ್ಪನ್ನಗಳು ಅತ್ಯಂತ ಶುಚಿ – ರುಚಿಯಾಗಿ ತಯಾರಾಗಿದ್ದು, ಮಲ್ಪೆಯ ಮೀನುಗಾರ […]