ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆ ಪರವಾನಿಗೆ: ಮೋಟಾರೀಕೃತ ನಾಡದೋಣಿಗಳ ಭೌತಿಕ ತಪಾಸಣೆ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್‌ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳ ಭೌತಿಕ ಪರಿಶೀಲನೆ ನಡೆಸಿ, ಪರವಾನಿಗೆಯನ್ನು ದೋಣಿ ಮಾಲಕರಿಗೆ ನೀಡಲಾಗುವುದು. ಮೋಟಾರೀಕೃತ ನಾಡದೋಣಿಗಳ ಮೀನುಗಾರಿಕಾ ಸೀಮೆ ಎಣ್ಣೆ ರಹದಾರಿ ನವೀಕರಣ ಹಾಗೂ ಹೊಸದಾಗಿರುವ ದೋಣಿಗಳಿಗೆ ಸೀಮೆಎಣ್ಣೆ ಪೂರೈಸುವ ಸಂಬಂಧ ಪರವಾನಿಗೆಯನ್ನು ನೀಡಲು ಅವರ ದೋಣಿಗಳನ್ನು ಭೌತಿಕ ತಪಾಸಣೆಗೆ ಒಳಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 23 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ […]

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರಿಕಾ ಸೌಲಭ್ಯಗಳಿಗೆ ಆಗಸ್ಟ್ 15 ರ ಒಳಗೆ ಅರ್ಜಿ ಸಲ್ಲಿಸಿ: ಮೀನುಗಾರಿಕಾ ಇಲಾಖೆ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಹಾಗೂ ನೀಲಿಕ್ರಾಂತಿ ಯೋಜನೆಯಡಿ 2018-19 ಮತ್ತು 2019-20 ರಲ್ಲಿ ಬಾಕಿ ಉಳಿದಿರುವ ಘಟಕಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿನ್ನಿರು, ಲವಣ ಹಾಗೂ ಕ್ಷಾರೀಯ ಪ್ರದೇಶಗಳಲ್ಲಿ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಸಿಹಿನೀರಿನ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಕಡಲ ಮೀನುಗಳ ಸಣ್ಣ ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಕಡಲ ಕಳೆ ಕೃಷಿಗೆ ರ‍್ಯಾಫ್ಟ್ ಪದ್ದತಿ, ಮೊನೊಲಿನ್/ಟ್ಯೂಬೆನೆಟ್ ಪದ್ಧತಿ […]

ಸ್ವಾವಲಂಬನೆ, ಸ್ವ-ಉದ್ಯೋಗವೆ ನಿರುದ್ಯೋಗ ಸಮಸ್ಯೆಗಿರುವ ಪರಿಹಾರ: ಎಸ್. ಅಂಗಾರ

ಉಡುಪಿ: ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಸ್ವ-ಉದ್ಯೋಗದ ಅವಶ್ಯಕತೆ ಇದೆ. ಜನರು ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಬಲರಾದಲ್ಲಿ ದೇಶದ ಆರ್ಥಿಕತೆ ಯಶಸ್ಸನ್ನು ಕಾಣುತ್ತದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು. ಸೋಮವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ಅಮೃತ ಸ್ವ- […]

ಜೂನ್ 1 ರಿಂದ ಜುಲೈ 31 ರ ವರೆಗೆ ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಉಡುಪಿ: ರಾಜ್ಯ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರ ವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಲಾಗಿರುತ್ತದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯ ವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ […]