ಅಗ್ನಿಶಾಮಕ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪದಕ
ಉಡುಪಿ: ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿನಾಯಕ ಉ ಕಲ್ಗುಟಕರ, ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕರಾದ ಅಶೋಕ್ ಕುಮಾರ್, ಕೃಷ್ಣ ನಾಯ್ಕ್ ಹಾಗೂ ವಾಹನ ಚಾಲಕ ಸುಧೀರ್ ಉಡುಪಿ, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ಸುಂದರ್ ವಿ ಮತ್ತು ಕಾರ್ಕಳ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅಚ್ಚುತ್ತ ಕರ್ಕೇರಾ ಇವರುಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪದಕ ಲಭಿಸಿರುತ್ತದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10 ನೇ ಮಹಡಿಯಲ್ಲಿ ಸಿಲುಕಿದ್ದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ: ಉಡುಪಿಯಲ್ಲೊಂದು ಸಿನೀಮೀಯ ಮಾದರಿ ಕಾರ್ಯಾಚರಣೆ
ಉಡುಪಿ: ಇಲ್ಲಿನ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ಮೆಂಟ್ ಒಂದರ 11ನೇ ಮಹಡಿಯ ಬಾಲ್ಕನಿಯಿಂದ 10 ನೇ ಮಹಡಿಗೆ ಇಳಿದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ತಂಡವೊಂದು ವಿಶೇಷ ರಕ್ಷಣಾ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಕ್ಷಿಪ್ರ ಸ್ಪಂದನೆ ಮಗುವಿನ ಸುರಕ್ಷತೆಯನ್ನು ಖಾತ್ರಿಪಡಿಸಿದೆ. ಘಟನೆಯ ವಿವರ ಸೋಮವಾರ ಬೆಳಗ್ಗೆ 11:40 ರ ಸುಮಾರಿಗೆ ಸಂಕಟದ ಕರೆ ಸ್ವೀಕರಿಸಿದ ತಕ್ಷಣ ಠಾಣಾಧಿಕಾರಿ […]
ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಅಗ್ನಿ ಅವಘಡ ತಡೆಯುವಿಕೆ ಕಾರ್ಯಾಗಾರ
ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಅಗ್ನಿ ಶಾಮಕದಳ ಉಡುಪಿ ಇದರ ಸಹಯೋಗದೊಂದಿಗೆ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆಯನ್ನು ಶನಿವಾರದಂದು ಹಮ್ಮಿಕೊಳ್ಳಲಾಯಿತು. ಅಗ್ನಿ ಶಾಮಕ ದಳದ ಅಧಿಕಾರಿಗಳಾದ ಸತೀಶ್ ಎನ್. ಮತ್ತು ತಂಡವು ಬೆಂಕಿ ಅವಘಡದ ಕಾರಣಗಳು ಹಾಗೂ ಬೆಂಕಿ ಅವಘಡಗಳನ್ನು ತಡೆಯುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿ, ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೋ. ಗುರುಪ್ರಸಾದ್ ರಾವ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೋ. […]