ರಾಜ್ಯಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತು 1,18,280 ಕೋಟಿ ರೂ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕಕ್ಕೆ 4,314 ಕೋಟಿ ಬಿಡುಗಡೆ

ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ರಾಜ್ಯಗಳಿಗೆ ಮೂರನೇ ಕಂತಿನ ತೆರಿಗೆ ಹಂಚಿಕೆಯ ಮೂರನೇ ಕಂತಾಗಿ 1,18,280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಮಾಸಿಕ ಹಂಚಿಕೆ 59,140 ಕೋಟಿ ರೂ. ಗಳಿಗಿಂತ ಇದು ಹೆಚ್ಚಾಗಿದೆ. ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲ ಲಭ್ಯವಾಗುವಂತೆ ಮಾಡಲು ಜೂನ್ 2023 ರಲ್ಲಿ ನಿಯಮಿತ ಕಂತಿಗೆ ಹೆಚ್ಚುವರಿಯಾಗಿ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕೃತ […]

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಗಳ ಸರಳ ವಿವಾಹ

ಬೆಂಗಳೂರು: ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಷ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಪುತ್ರಿ ವಾಙ್ಮಯಿ ಮತ್ತು ಪ್ರತೀಕ್ ಇವರ ವಿವಾಹ ಬೆಂಗಳೂರಿನ ಟ್ಯಾಮರಿಂಡ್ ಟ್ರೀ ನಲ್ಲಿ ಜೂನ್ 7 ರಂದು ನೆರವೇರಿತು. ಕೌಟುಂಬಿಕ ಸದಸ್ಯರು ಮಾತ್ರ ಹಾಜರಿದ್ದ ಈ ಸಮಾರಂಭದಲ್ಲಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧೂ ವರರಿಗೆ ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮತ್ತು ಶ್ರೀಕೃಷ್ಣನಿಗೆ […]

ಸಾರ್ವಕಾಲಿಕ ಗರಿಷ್ಠ ಜಿಎಸ್‌ಟಿ ಸಂಗ್ರಹಣೆ: ಶೇ 12 ರಷ್ಟು ಏರಿಕೆ; 1.87 ಲಕ್ಷ ಕೋಟಿ ರೂ ಸಂಗ್ರಹಣೆ

ನವದೆಹಲಿ: ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಏಪ್ರಿಲ್‌ನಲ್ಲಿ ಶೇ 12 ರಷ್ಟು ಏರಿಕೆಯಾಗಿ 1.87 ಲಕ್ಷ ಕೋಟಿ ರೂ ಸಂಗ್ರಹಣೆಯಾಗಿದೆ. ಜುಲೈ 2017 ರಲ್ಲಿ ಜಿಎಸ್‌ಟಿ ಅನ್ನು ಬಿಡುಗಡೆ ಮಾಡಿದ ನಂತರ ಇದು ಅತ್ಯಧಿಕ ಮಾಸಿಕ ಮಾಪ್-ಅಪ್ ಆಗಿದೆ. 20 ಏಪ್ರಿಲ್ 2023 ರಂದು 9.8 ಲಕ್ಷ ವಹಿವಾಟುಗಳ ಮೂಲಕ ಒಂದೇ ದಿನದಲ್ಲಿ ಸಂಗ್ರಹಿಸಲಾದ ಅತಿ ಹೆಚ್ಚು ತೆರಿಗೆ 68,228 ಕೋಟಿ ರೂಪಾಯಿ. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, 1,87,035 ಕೋಟಿಗಳ […]

ಆದಾಯ ತೆರಿಗೆ ಹಳೆಯ ಪದ್ಧತಿ: ಐಟಿಆರ್ ಸಲ್ಲಿಸುವ ಮೊದಲು ಈ ಕಡಿತವನ್ನು ತಿಳಿದುಕೊಳ್ಳಿ

ಆದಾಯ ತೆರಿಗೆ: ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದರು. ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ಧತಿಯು 2023-24ನೇ ಹಣಕಾಸು ವರ್ಷದಿಂದ ಡೀಫಾಲ್ಟ್ (ಪೂರ್ವ ನಿಯೋಜಿತ) ಆಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ತಮ್ಮ ತೆರಿಗೆ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಬಯಸುವ ತೆರಿಗೆದಾರರು ಅದರ ಬಗ್ಗೆ ಘೋಷಣೆಯನ್ನು ಮಾಡಬೇಕು. ಆದರೆ ನೀವು ಹಳೆಯ […]

ರಾಜ್ಯಗಳಾದ್ಯಂತ ಎಸ್‌ಯುವಿ ವಾಹನಗಳಿಗೆ ಏಕ ವ್ಯಾಖ್ಯಾನ: ತೆರಿಗೆ ದರದಲ್ಲಿ ಬದಲಾವಣೆ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಶನಿವಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಎಸ್‌ಯುವಿ ವಾಹನಗಳಿಗೆ ಒಂದೇ ವ್ಯಾಖ್ಯಾನವನ್ನು ಹೊಂದಲು ನಿರ್ಧರಿಸಿದೆ, ಇದು ತೆರಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಪ್ರಸ್ತುತ 1500 ಸಿಸಿ ಇಂಜಿನ್ ಸಾಮರ್ಥ್ಯ, 4000 ಎಂಎಂ ಗಿಂತ ಉದ್ದ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರುಗಳು ಜಿಎಸ್‌ಟಿ 28% ಮತ್ತು 22% ಸೆಸ್ ಅನ್ನು ಆಕರ್ಷಿಸುತ್ತವೆ, ಇದು ಪರಿಣಾಮಕಾರಿ ತೆರಿಗೆ ದರ 50% ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ರಾಜ್ಯಗಳು ವಾಹನಗಳನ್ನು […]