ಕರಾವಳಿ ಕರ್ನಾಟಕದಲ್ಲಿ ಅತ್ಯಾಧಿಕ ಮಳೆ ಮುನ್ಸೂಚನೆ: ರೈತರು ಮತ್ತು ಮೀನುಗಾರರಿಗೆ ಮುನ್ನೆಚ್ಚರಿಕೆಗಳು

ಉಡುಪಿ/ಮಂಗಳೂರು: ಮುಂದಿನ 48 ರಿಂದ 72 ಗಂಟೆಗಳ ಅವಧಿಯಲ್ಲಿ ಕರ್ನಾಟಕದ, ವಿಶೇಷವಾಗಿ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಅಧಿಕದಿಂದ ಅತ್ಯಾಧಿಕ ಮಳೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಮತ್ತು ಮೀನುಗಾರರಿಗೆ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. ರೈತರು ಮುಂದಿನ 2-3 ದಿನಗಳವರೆಗೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮುಂದೂಡಬಹುದು (ಬಿತ್ತನೆ, ಸಿಂಪಡಣೆ, ರಸಗೊಬ್ಬರ ಬಳಕೆ ಮತ್ತು ಕೊಯ್ಲು) ರೈತರು ಭತ್ತದ ನಾಟಿಯನ್ನು ಮುಂದೂಡಬಹುದು ಮೀನುಗಾರರು ಸಮುದ್ರ ತೀರದಿಂದ ದೂರ ಇರುವಂತೆ ಸೂಚಿಸಲಾಗಿದೆ ಅಡಿಕೆ ತೋಟಗಳಲ್ಲಿ ರೈತರು ನೀರು ಹರಿಯಲು […]
ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಪ್ರತ್ಯೇಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಫರ್ಧೆ ನಡೆಸಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ರೈತರು ಹಾಗೂ ರೈತ ಮಹಿಳೆಯರು ವಿವಿಧ ಹಂತದ ಬೆಳೆ ಸ್ಫರ್ಧೆಗೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ, ಪಹಣಿ, ಪರಿಶಿಷ್ಟ ಜಾತಿ […]
ನಿಟ್ಟೆ: ರೈತ ಉತ್ಪಾದಕ ಸಂಸ್ಥೆಯ ವ್ಯಾಪಾರ ಮಳಿಗೆ ಆರಂಭ

ನಿಟ್ಟೆ: ಕಾರ್ಕಳ ಪಡುಬಿದ್ರೆ ಮುಖ್ಯರಸ್ತೆಯ ಹಾಲೆಕಟ್ಟೆ ಕಲ್ಯಾದ ಸುರಕ್ಷ ಸಂಕೀರ್ಣದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ವ್ಯಾಪಾರ ಮಳಿಗೆಯು ಜೂ.17 ರಂದು ಆರಂಭವಾಯಿತು. ನಿಟ್ಟೆ ಆಸುಪಾಸಿನ ಎಲ್ಲಾ ರೈತರ ಸಮೂಹ ಇದಾಗಿದ್ದು, ಕೃಷಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ಹಾಗೂ ಸೇವಾ ಸೌಲಭ್ಯಗಳು ಇಲ್ಲಿ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ಚೇರ್ ಮ್ಯಾನ್ ಅಶೋಕ್ ಅಡ್ಯಂತಾಯ, ನಿಟ್ಟೆ ಸಂಸ್ಥೆಯ ಅಟಲ್ ಇಂಕ್ಯೂಬೇಶನ್ ಸೆಂಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎ.ಪಿ. ಆಚಾರ್ಯ, ಇಂಕ್ಯೂಬೇಶನ್ ಮ್ಯಾನೇಜರ್ ಪುನೀತ್ […]
ರೈತರಿಂದಲೇ ಬೆಳೆ ಸಮೀಕ್ಷೆ ನಡೆಸಲು ಖಾರಿಫ್ ಫಾರ್ಮರ್ ಕ್ರಾಪ್ ಸರ್ವೆ ಆ್ಯಪ್ ಅಭಿವೃದ್ದಿ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. ರೈತರು ಗೂಗಲ್ ಪ್ಲೇಸ್ಟೋರ್‌ನಿಂದ Kharif Farmer Crop Survey – 2022-23 ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಿ ಆಧಾರ್‌ನ ಮಾಹಿತಿಗಳನ್ನು ಭರ್ತಿ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿದಾಗ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬರಲಿದೆ. ಓ.ಟಿ.ಪಿ ಯನ್ನು ದಾಖಲಿಸಿ, ಜಿಲ್ಲೆ, […]
ಜಲಾಯನ ಅಭಿವೃದ್ಧಿ ಇಲಾಖೆ ವತಿಯಿಂದ ರೈತ ಉತ್ಪಾದಕ ಸಂಸ್ಥೆಗಳಿಗೆ ಏಕ ರೂಪ ಬ್ರಾಂಡ್ ರೂಪಿಸುವ ಸ್ಪರ್ಧೆ

ಉಡುಪಿ: ಜಲಾಯನ ಅಭಿವೃದ್ಧಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಗ್ಗೂಡಿಸಿ ಅವರ ಉತ್ಪನ್ನಗಳಿಗೆ ವಿಶಿಷ್ಟ ಹಾಗೂ ವಿನೂತನವಾದ ಏಕರೂಪ ಬ್ರ್ಯಾಂಡಿಂಗ್ ಅನ್ನು ವಿನ್ಯಾಸಗೊಳಿಸಿ, ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ರೈತ ಉತ್ಪಾದಕ ಸಂಸ್ಥೆಗಳಿಗೆ ಏಕರೂಪ ಬ್ರಾಂಡ್ ರೂಪಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ರೈತರು, ಗ್ರಾಹಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಅತ್ಯುತ್ತಮ ಬ್ರಾಂಡ್, ವಿಶಿಷ್ಟ ಅಡಿ ಬರಹ ಹಾಗೂ ಆಕರ್ಷಕವಾದ ಲೋಗೋಗಳಿಗೆ ಪ್ರಥಮ 75,000 […]