ಕೊರೊನಾದಿಂದ ಆಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಜಿಲ್ಲಾಡಳಿತ ವಿಫಲ: ವಿಶ್ವಾಸ್ ಅಮೀನ್
ಉಡುಪಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ. ಕೊರೊನಾ ಸಮಸ್ಯೆ ಎದುರಾಗಿನಿಂದಲೂ ಜಿಲ್ಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕೊರೊನಾ ನೆಪದಲ್ಲಿ ಜನರಿಗೆ ದೌರ್ಜನ್ಯ, ದಬ್ಬಾಳಿಕೆ ಮಾಡಲಾಗುತ್ತಿದೆ. ಇದಕ್ಕೆ ರಕ್ಷಾ ಸಂಶಯಾಸ್ಪದ ಸಾವಿನ ಪ್ರಕರಣ, ಕೊರೊನಾ ಪಾಸಿಟಿವ್ ಸುಳ್ಳು ವರದಿ ಹಾಗೂ ಕುಂದಾಪುರದ ವ್ಯಕ್ತಿಯ ಮೃತ ದೇಹ ಅದಲು ಬದಲು ಪ್ರಕರಣಗಳೇ ಸ್ಪಷ್ಟ ನಿದರ್ಶನಗಳು ಎಂದು ದೂರಿದ್ದಾರೆ. ಜಿಲ್ಲಾಡಳಿತದ, […]