ಯುವಕರಿಗೆ ಸೇನಾ ತರಬೇತಿ ನೀಡಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಸೇನೆಗೆ ಸೇರಬಯಸುವ ರಾಜ್ಯದ ಯುವ ಜನತೆಗೆ ಪೂರ್ವಭಾವಿ ತರಬೇತಿಯನ್ನು ನೀಡಲು ಓರ್ವ ಮಾಜಿ ಸೇನಾ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ತರಬೇತಿ ಹೊಂದಿರುವ ಮೂರು ಮಾಜಿ ಸೈನಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ dydirdswrmlore@gmail.com ಅನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸೈನಿಕರಿಗೆ ವೃತ್ತಿಪರ ಕೌಶಲ್ಯ ತರಬೇತಿ
ಉಡುಪಿ: ಐ.ಸಿ.ಐ.ಸಿ.ಐ ಅಕಾಡೆಮಿ ಫಾರ್ ಸ್ಕಿಲ್ಸ್, ಬೆಂಗಳೂರು ಇವರ ವತಿಯಿಂದ ಮಾಜಿ ಸೈನಿಕರು ಮತ್ತು ಅವರನ್ನು ಅವಲಂಬಿಸಿದವರಿಗೆ ಉಚಿತವಾಗಿ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಅಡ್ಜ್ಯೂಟಂಟ್ ಜನರಲ್ಸ್ ಬ್ರಾಂಚ್, ಐ.ಹೆಚ್.ಕ್ಯೂ (ಆರ್ಮಿ), ನವದೆಹಲಿ ಇದರೊಂದಿಗೆ ತಿಳುವಳಿಯ ಸ್ಮರಣಿಕೆಯನ್ನು ಹೊಂದಿದ್ದು, ಈ ಮೂಲಕ ಯುವಜನರನ್ನು ಉದ್ಯೋಗಿಗಳನ್ನಾಗಿ ಮಾಡಲು ಉದ್ಯಮಕ್ಕೆ ಸಂಬಂಧಿತ ಸಿದ್ಧಾಂತ ಹಾಗೂ ಪ್ರಾಯೋಗಿಕ ತರಬೇತಿಯನ್ನು ಒದಗಿಸುತ್ತದೆ. ತರಬೇತಿ ಪಡೆಯಲು ಇಚ್ಛಿಸುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ […]