ಮಲ್ಪೆ: ನೀರಿನಲ್ಲಿ ಮುಳುಗಿದ್ದ ದುಬಾರಿ ಐ-ಫೋನ್ ಮೇಲೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ

ಮಲ್ಪೆ: ಇಲ್ಲಿನ ಹೆಸರಾಂತ ಈಜು ತಜ್ಞ, ನೀರಿನಲ್ಲಿ ಮುಳುಗಿದ್ದವರ ಮೇಲೆತ್ತುವ ಆಪದ್ಬಾಂಧವ ಈಶ್ವರ್ ಮಲ್ಪೆ ಅವರು 10 ಫೀಟ್ ನೀರಿನಾಳದಲ್ಲಿ ಮುಳುಗಿದ್ದ ಬಹು ದುಬಾರಿ ಐ-ಫೋನ್ ಅನ್ನು ಮೇಲೆತ್ತಿ ಫೋನಿನ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಮಲ್ಪೆ ದಕ್ಕೆ ಬಳಿ ಈ ಘಟನೆ ನಡೆದಿದ್ದು, ವ್ಯಾಪಾರಸ್ಥರೊಬ್ಬರ 1.5 ಲಕ್ಷದ ಐ-ಫೋನ್ ಒಂದು ನೀರಿಗೆ ಬಿದ್ದಿದ್ದು, ಅದರಲ್ಲಿ ಹಲವು ಪ್ರಮುಖ ಕಡತಗಳಿದ್ದವು ಎನ್ನುವ ಕಾರಣಕ್ಕೆ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಫೋನ್ ಅನ್ನು ನೀರಿನಿಂದ ಮೇಲೆತ್ತಿ ಕೊಡುವಂತೆ ಮನವಿ ಮಾಡಿದ್ದರು. […]