ಚಾರಣಿಗರಿಗೆ ಸಿಹಿಸುದ್ದಿ: ಜೂನ್ 1ರಿಂದ ಈ ಎಲ್ಲಾ ಟ್ರೆಕ್ಕಿಂಗ್ ಗಳಿಗೆ ಗ್ರೀನ್ ಸಿಗ್ನಲ್

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ಪ್ರಿಯರು ಮತ್ತು ಚಾರಣಿಗರಿಗೆ ಸಂತಸದ ಸುದ್ದಿ ಸಿಕ್ಕಿದೆ. ಮಳೆಗಾಲ ಆರಂಭದ ಹೊತ್ತಿಗೆ ಪಶ್ಚಿಮ ಘಟ್ಟದ ಹಸಿರು ಮರುಕಳಿಸಿದ್ದು, ಪ್ರಮುಖ ಚಾರಣ ಸ್ಥಳಗಳು ಹಾಗೂ ಜಲಪಾತಗಳು ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿವೆ. ಜೂನ್ 1ರಿಂದ ನೇತ್ರಾವತಿ ಪೀಕ್, ಬಂಡಾಜೆ ಫಾಲ್ಸ್, ಗಡಾಯಿಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಕಾಡಿಚ್ಚಿನ ಭೀತಿ ಮತ್ತು ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಈ ಪ್ರದೇಶಗಳಿಗೆ ಪ್ರವೇಶ ನಿಷೇಧ […]