ಪ.ಜಾ/ಪ.ಪಂ ದ ಮಹಿಳಾ ಪದವೀಧರರಿಗೆ ಉಚಿತ ಉದ್ಯಮಶೀಲತಾ ತರಬೇತಿ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಪದವೀಧರರು ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಬೆಂಗಳೂರಿನ ಐ.ಐ.ಎಂ ನಲ್ಲಿ ಉಚಿತ ಉದ್ಯಮಶೀಲತಾ ತರಬೇತಿಗಾಗಿ ಇಲಾಖೆಯ ವೆಬ್‌ಸೈಟ್ www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ: 9482300400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯಮಗಳಿಗಾಗಿ ಆನ್ ಲೈನ್ ಮೂಲಕ ಇ-ಪ್ರಮಾಣ ಪತ್ರ ಪಡೆದುಕೊಳ್ಳಲು ಉದ್ಯಮ ನೋಂದಣಿ ಸಪ್ತಾಹ ಆಯೋಜನೆ

ಉಡುಪಿ: ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಮಂತ್ರಾಲಯದ ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದ್ದು, ಆನ್‌ಲೈನ್ ಮೂಲಕ ಇ-ಪ್ರಮಾಣ ಪತ್ರವನ್ನು www.udyamregistration.gov.in ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಕೈಗಾರಿಕೆ ಇಲಾಖೆಯಿಂದ ಖಾಯಂ ನೊಂದಣಿ ಪ್ರಮಾಣ ಪತ್ರ ಅಥವಾ ಐ.ಇ.ಎಮ್ ಪಾರ್ಟ್-2 ಅಥವಾ ಉದ್ಯೋಗ್ ಆಧಾರ್ ಮೆಮೋರೆಂಡಮ್ (ಯು.ಎ.ಎಮ್) ಪ್ರಮಾಣ ಪತ್ರ ಪಡೆದಿರುವ ಘಟಕಗಳು ಸಹ ಈ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯ ಎಲ್ಲಾ […]

ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ

ಉಡುಪಿ: ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಉದ್ದಿಮೆಗಳ ಅಭಿವೃದ್ಧಿಗಾಗಿ ಉದ್ಯಮಿಯಾಗು ಹಾಗೂ ಉದ್ಯೋಗ ನೀಡು ಕಾರ್ಯಾಗಾರವು ಮೇ 12 ರಂದು ಮಂಗಳೂರು, ಕೊಡಿಯಾಲ್‌ಬೈಲ್‌ನ ಡಾ.ಟಿ.ಎಮ್.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.30 ರವರೆಗೆ ಮಣಿಪಾಲದ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಾಗಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ, ಮೂಲಸೌಕರ್ಯ, ಹಣಕಾಸು ಸೌಲಭ್ಯ […]