ಎಮೆರ್ಜೆನ್ಸಿ ಮೆಡಿಸಿನ್ ಸ್ನಾತಕೋತ್ತರ ವಿಭಾಗದಲ್ಲಿ ಅತಿ ಹೆಚ್ಚು ಅಂಕ: ಡಾ. ರಚನಾಗೆ ರಾಷ್ಟ್ರಪತಿ ಚಿನ್ನದ ಪದಕ
ಉಡುಪಿ: ಇತ್ತೀಚಿಗೆ ದೆಹಲಿಯಲ್ಲಿ ಆರೋಗ್ಯ ಮಂತ್ರಾಲಯದ ಆಶ್ರಯದಲ್ಲಿ ನಡೆದ ವಾರ್ಷಿಕ ಸ್ನಾತಕೋತ್ತರ ಘಟಿಕೋತ್ಸವ ಸಮಾರಂಭದಲ್ಲಿ 2019 ಸಾಲಿನ ಎನ್.ಬಿ.ಇ.ಎಂ.ಎಸ್ ನ ಎಮೆರ್ಜೆನ್ಸಿ ಮೆಡಿಸಿನ್ ಸ್ನಾತಕೋತ್ತರ ವಿಭಾಗದಲ್ಲಿ ಭಾರತ ದೇಶದಲ್ಲಿಯೇ ಅತೀ ಹೆಚ್ಚು ಅಂಕಗಳಿಸಿರುವ ಪ್ರಸಿದ್ಧ ಯುವ ವೈದ್ಯೆ ಡಾ.ರಚನಾ ರಾಷ್ಟ್ರಪತಿಯವರ ಚಿನ್ನದ ಪದಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಉಡುಪಿಯ ಕಲ್ಯಾಣಪುರದ ಶ್ರೀಮತಿ ವಿಜಯಾ ಭಟ್ ಹಾಗೂ ಪ್ರಸಿದ್ಧ ವೈದ್ಯ ಡಾ ಆರ್.ಎನ್ ಭಟ್ ದಂಪತಿಗಳ ಪುತ್ರಿ ಡಾ. ರಚನಾ ಉಡುಪಿಯ ಸೈಂಟ್ ಸಿಸಿಲಿ, ಎಂಜಿಮ್ ಮತ್ತು […]