ತ್ರಿಪುರಾ ನಾಗಾಲ್ಯಾಂಡ್ ನಲ್ಲಿ ಸರಕಾರ ರಚಿಸುವತ್ತ ಬಿಜೆಪಿ; ಮೇಘಾಲಯ ಸಮ್ಮಿಶ್ರ ಸರ್ಕಾರದತ್ತ ಚುನಾವಣಾ ಫಲಿತಾಂಶ
ನವದೆಹಲಿ: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿವೆ. ಏತನ್ಮಧ್ಯೆ, ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆಯಿಂದಾಗಿ ಮೇಘಾಲಯವು ಸಮ್ಮಿಶ್ರ ಸರಕಾರ ರಚಿಸುವತ್ತ ಸಾಗುತ್ತಿದೆ. ಚುನಾವಣಾ ಟ್ರೆಂಡ್‌ಗಳು ಇದೇ ರೀತಿ ಮುಂದುವರಿದಲ್ಲಿ ಬಿಜೆಪಿಯು ಈಶಾನ್ಯ ಭಾರತದಲ್ಲಿ ತನ್ನ ಬಲವಾದ ಹಿಡಿತವನ್ನು ಉಳಿಸಿಕೊಳ್ಳುತ್ತದೆ ಮತ್ತು 8 ರಲ್ಲಿ 7 ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಲಿದೆ. […]