ದೇಶದ ಅತ್ಯಂತ ಕಿರಿಯ ಮಿಲಿಯನೇರ್!! ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
ಬೆಂಗಳೂರು: ಇನ್ಫೋಸಿಸ್ (Infosys) ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೇಖಕಿ ಸುಧಾ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ಅವರಿಗೆ ನವೆಂಬರ್ 10, 2023 ರಂದು ಜನಿಸಿದ ಏಕಾಗ್ರಹ ರೋಹನ್ ಮೂರ್ತಿ ದೇಶದ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾನೆ. ನಾಲ್ಕು ತಿಂಗಳ ಮಗುವೀಗ ಇನ್ಫೋಸಿಸ್ನಲ್ಲಿ 0.04 ರಷ್ಟು ಷೇರುಗಳ ಮಾಲೀಕನಾಗಿದ್ದಾನೆ. ಏಕೆಂದರೆ, 240 ಕೋಟಿ ಮೌಲ್ಯದ ಷೇರುಗಳನ್ನು ನಾರಾಯಣ ಮೂರ್ತಿ ಮೊಮ್ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.