ದಿನವಿಡೀ ಇಯರ್ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಅದೆಷ್ಟು ಡೇಂಜರಸ್ ಗೊತ್ತಾ?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಯರ್‌ಫೋನ್ ನಮ್ಮ ಜೀವನದ ಭಾಗವಾಗಿಬಿಟ್ಟಿವೆ. ಆಫೀಸ್ ಮೀಟಿಂಗ್‌ಗಳಿಂದ ಹಿಡಿದು ಸಂಗೀತ, ಫೋನ್ ಕಾಲ್‌ಗಳವರೆಗೆ ಎಲ್ಲಕ್ಕೂ ನಾವು ಇಯರ್‌ಫೋನ್‌ಗಳನ್ನೇ ಹೆಚ್ಚು ಬಳಸುತ್ತೇವೆ. ಆದರೆ, ಗಂಟೆಗಟ್ಟಲೆ ಇವುಗಳನ್ನು ಬಳಸುವುದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಶ್ರವಣ ಶಕ್ತಿ ಕುಂಠಿತವಾಗುವ ಅಪಾಯ ಇಯರ್‌ಫೋನ್‌ನಲ್ಲಿ ಜೋರಾಗಿ ಸಂಗೀತ ಕೇಳುವುದು ಕಿವಿಯ ಒಳಗಿನ ಸೂಕ್ಷ್ಮ ನರಗಳಿಗೆ ನೇರವಾಗಿ ಹಾನಿ ಉಂಟುಮಾಡುತ್ತದೆ. ದೀರ್ಘಕಾಲ ಹೆಚ್ಚು ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಕಿವಿ ಮಂದವಾಗುವುದು […]