ಚುನಾವಣಾ ಕರ್ತವ್ಯಾಧಿಕಾರಿಗಳಿಗೆ ಏ.17 ರಂದು ಎರಡನೇ ಹಂತದ ತರಬೇತಿ ಕಾರ್ಯಕ್ರಮ
ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ಈಗಾಗಲೇ ನೇಮಕ ಮಾಡಿರುವ PRO, APRO, PO ಗಳಿಗೆ ದಿನಾಂಕ 17-04-2024 ರಂದು ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಈ ಕೆಳಗೆ ತಿಳಿಸಿರುವ ಸ್ಥಳಗಳಲ್ಲಿ ಆಯೋಜಿಸಲಾಗಿದೆ. 119-ಕುಂದಾಪುರ- ಭಂಡಾರ್‌ಕರ್ ಆಟ್ಸ್‌೯ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ120-ಉಡುಪಿ-ಸೈಂಟ್ ಸಿಸಿಲಿಸ್ ಸ್ಕೂಲ್, ಬ್ರಹ್ಮಗಿರಿ ಉಡುಪಿ121-ಕಾಪು- ದಂಡತೀಥ೯ ಪಿ.ಯು. ಕಾಲೇಜು, ಉಳಿಯಾರಗೋಳಿ, ಕಾಪು122-ಕಾರ್ಕಳ-ಕ್ರೈಸ್ಟ್ ಕಿಂಗ್ ಪಿ.ಯು. ಕಾಲೇಜು, ಗಾಂಧಿ ಮೈದಾನ, ಕಾಕ೯ಳ ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳಿಗೆ […]
ಮಂಗಳೂರು: ರಸ್ತೆಯಲ್ಲಿ ಇಫ್ತಾರ್ ಆಯೋಜನೆ; ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್
ಮಂಗಳೂರು: ಮಡಿಪು ಜಂಕ್ಷನ್ ರಸ್ತೆಯಲ್ಲಿ ಇಫ್ತಾರ್ ಕೂಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಯೋಜಕರ ವಿರುದ್ದ ಕಾರಣ ಕೇಳಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಾರ್ಚ್ 29 ರಂದು ಮುಡಿಪು ಜಂಕ್ಷನ್ ನಲ್ಲಿ ಅಬೂಬಕ್ಕರ್ ಸಿದ್ಧೀಕ್ ಎಂಬುವರು ಸಾರ್ವಜನಿಕ ರಸ್ತೆಯ ಮಧ್ಯದಲ್ಲೇ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಚುನಾವಣಾ ಆಯೋಗ, ರಸ್ತೆಯಲ್ಲಿ ಇಫ್ತಾರ್ ಕೂಟ […]
2024 – ಲೋಕಸಭಾ ಚುನಾವಣೆಗೆ ದಿನ ನಿಗದಿ: ಏ.19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಚುನಾವಣೆ; ಜೂನ್ 4 ರಂದು ಮತಎಣಿಕೆ
ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ದಿನಾಂಕಗಳನ್ನು ಘೋಷಿಸಿದರು. ಲೋಕಸಭೆ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. 1 ಹಂತ ಏ.19 ರಂದು, 2 ನೇ ಹಂತ ಏ.26 ರಂದು, 3ನೇ ಹಂತ ಮೇ 7 ರಂದು (ಕರ್ನಾಟಕ), 4ನೇ ಹಂತ ಮೇ 13ರಂದು, 5 ನೇ ಹಂತವು ಮೇ 20 ರಂದು, 6ನೇ ಹಂತ ಮೇ 25ರಂದು, 7ನೇ ಹಂತ ಜೂನ್ 1 ರಂದು ನಡೆಯಲಿದೆ. ಆಂಧ್ರ ಪ್ರದೇಶ […]
ಚುನಾವಣಾ ಬೂತ್ ಗಳಲ್ಲಿ ವೀಡಿಯೊ ರೆಕಾರ್ಡಿಂಗ್ ಶೇ 100 ಕ್ಕೆ ಹೆಚ್ಚಿಸಲು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Loksabha Election) ವೇಳೆ ಎಲ್ಲಾ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡುವಂತೆ ಬಿಜೆಪಿಯು ಚುನಾವಣಾ ಆಯೋಗವನ್ನು(ECI) ಒತ್ತಾಯಿಸಿದೆ. ಬುಧವಾರದಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದ ಪಕ್ಷದ ನಿಯೋಗವು ಈ ವಿಚಾರವಾಗಿ ನವದೆಹಲಿಯಲ್ಲಿ ಆಯೋಗವನ್ನು ಭೇಟಿ ಮಾಡಿದೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೈಷ್ಣವ್, ಮುಂಬರುವ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಮಾಡುವ ವೀಡಿಯೊ ರೆಕಾರ್ಡಿಂಗ್ ಪ್ರಮಾಣವನ್ನು ಶೇಕಡಾ 50 ರಿಂದ 100 ಕ್ಕೆ ಹೆಚ್ಚಿಸಬೇಕು ಎಂದು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿದ್ದೇವೆ. ಮತಗಟ್ಟೆಗಳಲ್ಲಿ […]
ಚುನಾವಣಾ ಬಾಂಡ್ ಯೋಜನೆ ರದ್ದು: ಅಸಂವಿಧಾನಿಕ ಮತ್ತು ಅನಿಯಂತ್ರಿತ ಎಂದ ಸುಪ್ರೀಂ ಕೋರ್ಟ್
ನವದೆಹಲಿ: ಐತಿಹಾಸಿಕ ತೀರ್ಪಿನಲ್ಲಿ, ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್(Supreme Court) ಇಂದು ಚುನಾವಣಾ ಬಾಂಡ್ (Electoral Bond Scheme) ಯೋಜನೆಯನ್ನು ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ಗಳ ಯೋಜನೆಯು ಅಸಂವಿಧಾನಿಕ ಮತ್ತು ಅನಿಯಂತ್ರಿತವಾಗಿದೆ ಮತ್ತು ರಾಜಕೀಯ ಪಕ್ಷಗಳು ಮತ್ತು ದಾನಿಗಳ ನಡುವೆ ವಿನಿಮಯ ವ್ಯವಸ್ಥೆಗೆ ಕಾರಣವಾಗಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಕಪ್ಪು ಹಣದ ವಿರುದ್ಧ ಹೋರಾಡುವ ಮತ್ತು ದಾನಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶಿತ ಉದ್ದೇಶವು ಯೋಜನೆಯನ್ನು ರಕ್ಷಿಸಲು ಸಾಧ್ಯವಿಲ್ಲ. […]