ಶಿರಿಯಾರ ಕಲ್ಮರ್ಗಿ ಜೈ ಗಣೇಶ್ ಸೊಸೈಟಿಯಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಆರಂಭ

ಬ್ರಹ್ಮಾವರ: ಇಲ್ಲಿನ ಶಿರಿಯಾರ ಕಲ್ಮರ್ಗಿ ಜೈ ಗಣೇಶ್ ಸೊಸೈಟಿಯಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಇತ್ತೀಚೆಗೆ ಆರಂಭಗೊಂಡಿತು. ವಕೀಲ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ದೀಪ ಬೆಳಗಿಸಿ ಇ ಸ್ಟ್ಯಾಂಪ್ ಗೆ ಚಾಲನೆ ನೀಡಿ, ಸೊಸೈಟಿಯಲ್ಲಿ ಆರಂಭಗೊಂಡಿರುವ ಈ ಸ್ಟ್ಯಾಂಪ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಶಿವಾನಂದ ಶ್ಯಾನುಭಾಗ್, ದಿನೇಶ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.