ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ: ಭಕ್ತರಿಂದ ಕಾಣಿಕೆ ನೀಡಲಾದ ಬೆಳ್ಳಿ ಕಿರೀಟದಲ್ಲಿ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸಿದ ದುರ್ಗಾ ದೇವಿ
ಮಣಿಪಾಲ: ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ, ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿಯು ಶ್ರಾವಣ ಶುಕ್ರವಾರದಂದು ಮಣಿಪಾಲದ ಉದ್ಯಮಿ ರಾಜೇಶ್ ಮತ್ತು ಶ್ರೀಮತಿ ಪದ್ಮಿನಿ ರಾಜೇಶ್ ಕಾಣಿಕೆ ರೂಪದಲ್ಲಿ ಅರ್ಪಿಸಿದ ಬೆಳ್ಳಿಯ ಕೀರಿಟವನ್ನು ಧರಿಸಿ ಸರ್ವಾಲಂಕಾರ ಭೂಷಿತಳಾಗಿ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಅನುಗ್ರಹಿಸಿದಳು. ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿದ ಸಂಜೀವಿನಿ ಮೃತ್ಯುಂಜಯ ಯಾಗ, ಸಂಜೆ ನೆರವೇರಿದ ಶ್ರೀ ದುರ್ಗಾ ನಮಸ್ಕಾರ ಪೂಜೆಯ ದೃಶ್ಯಾವಳಿಗಳು