ಜಗತ್ತಿನಲ್ಲಿ 35 ಮಿಲಿಯನ್ ಮಾದಕ ದ್ರವ್ಯ ವ್ಯಸನಿಗಳು: ಡಾ.ಭಂಡಾರಿ
ಉಡುಪಿ, ಜೂ.26: ಜಗತ್ತಿನಲ್ಲಿ ಇಂದು 35 ಮಿಲಿಯನ್ ಮಂದಿ ಮಾದಕ ದ್ರವ್ಯ ವ್ಯಸನಿಗಳು ಇದ್ದಾರೆ. 11 ಮಿಲಿಯನ್ ಮಂದಿ ಚುಚ್ಚುಮದ್ದಿನ ಮೂಲಕ ಮಾದಕ ದ್ರವ್ಯ ಸೇವಿಸುತ್ತಿದ್ದಾರೆ. ಹೀಗೆ ಅಫೀಮು ಸೇವಿಸುವ ಮೂರನೆ ಎರಡರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮಾನಸಿಕ ತಜ್ಞ ಡಾ. ಪಿ.ವಿ.ಭಂಡಾರಿ ತಿಳಿಸಿದ್ದಾರೆ. ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಬುಧವಾರ ನಡೆದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ವೈದ್ಯರು, ಔಷಧ ಮಾರಾಟಗಾರರು […]