ಮೇಡ್-ಇನ್-ಇಂಡಿಯಾ ‘ದ್ರೋಣಿ’ ಕ್ಯಾಮೆರಾ ಡ್ರೋನ್ ಬಿಡುಗಡೆಗೊಳಿಸಿದ ಎಂಎಸ್ ಧೋನಿ

ಚೆನ್ನೈ: ‘ಹೆಲಿಕಾಪ್ಟರ್ ಶಾಟ್’ ಅನ್ನು ಜನಪ್ರಿಯಗೊಳಿಸಿದ ಭಾರತೀಯ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರು ‘ದ್ರೋಣಿ’ ಹೆಸರಿನ ಗ್ರಾಹಕ ಕ್ಯಾಮೆರಾ ಡ್ರೋನ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಂಎಸ್ ಧೋನಿ ರಾಯಭಾರಿಯಾಗಿರುವ ಗರುಡಾ ಏರೋಸ್ಪೇಸ್ ಈ ಸುಧಾರಿತ ವೈಶಿಷ್ಟ್ಯಗಳಿರುವ ಮೇಡ್-ಇನ್-ಇಂಡಿಯಾ ಕ್ಯಾಮೆರಾ ಡ್ರೋನ್ ಅನ್ನು ತಯಾರಿಸಿದೆ. ಡ್ರೋನ್ ತಂತ್ರಜ್ಞಾನದಲ್ಲಿ ಆದ್ಯಪ್ರವರ್ತಕನಾಗಿರುವ ಗರುಡ ಏರೋಸ್ಪೇಸ್, ಇದುವರೆಗೆ ಕೃಷಿ ಕೀಟನಾಶಕ ಸಿಂಪಡಣೆ, ಸೌರಫಲಕ ಸ್ವಚ್ಛತೆ, ಕೈಗಾರಿಕಾ ಪೈಪ್‌ಲೈನ್ ತಪಾಸಣೆ, ಮ್ಯಾಪಿಂಗ್, ಸರ್ವೇಯಿಂಗ್, ಸಾರ್ವಜನಿಕ ಪ್ರಕಟಣೆಗಳು ಮತ್ತು ವಿತರಣಾ ಸೇವೆಗಳಿಗಾಗಿ ಭಾರತದಲ್ಲಿ […]