ನಗರಸಭಾ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ ವಿತರಣೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತ್ಯಧಿಕ ಅಂಕ ಗಳಿಸಿರುವ ಪ್ರತಿಭಾನ್ವಿತ 3 ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ, ಶಾಲಾ ಮಟ್ಟದಲ್ಲಿಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಡಾ. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಮತ್ತು 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿನಿಗೆ ಕುಮಾರಿ ಗಾಯತ್ರಿ ಸ್ಮಾರಣ ಪಾರಿತೋಷಕ ವಿತರಣಾ ಸಮಾರಂಭವು, ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ಜನ್ಮ ದಿನವಾದ ಜುಲೈ 6 ಬುಧವಾರದಂದು […]