ಮುಂಬಯಿ “ಬೊಂಬಾಯಿಡ್ ತುಳುನಾಡ್”ವಿಶ್ವ ಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಡಾ।ಸುನೀತಾ ಎಂ. ಶೆಟ್ಟಿ ಆಯ್ಕೆ

ಮುಂಬಯಿ: ಕಲಾಜಗತ್ತು ಮುಂಬಯಿ ಆಶ್ರಯದಲ್ಲಿ ನವೆಂಬರ್ 8-10ರ ವರೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ತುಳುವರ ಕೂಡುವಿಕೆಯೊಂದಿಗೆ ಮುಂಬೈನಲ್ಲಿ ನಡೆಯಲಿರುವ “ಬೊಂಬಾಯಿಡ್ ತುಳುನಾಡ್ “ವಿಶ್ವಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿಯ ಹಿರಿಯ ಸಾಹಿತಿ ಡಾ ।ಸುನೀತಾ ಎಂ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಮುಂಬಯಿಯ ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಖಾನ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತುಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ತುಳು ನಾಟಕ, ಜಾನಪದ ನೃತ್ಯಗಳು, ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ಕೊರಗರ ಡೋಲು, ತುಳುನಾಡ ಪ್ರಾಚೀನ ಕ್ರೀಡೆಗಳ […]