ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ: ಡಾ.ಮಹಾಬಲೇಶ್ವರ ರಾವ್

ಉಡುಪಿ: ಇಂದು ಕನ್ನಡದಲ್ಲಿ ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ ಬಂದಿದ್ದು, ಹಾಸ್ಯ ಸಾಹಿತಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಆತಂಕ ವ್ಯಕ್ತಪಡಿಸಿದರು. ಸುಹಾಸಂ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ನಗರದ ಕಿದಿಯೂರು ಹೋಟೆಲ್‌ನ ಪವನ್ ರೂಫ್‌ಟಾಪ್‌ನಲ್ಲಿ ಭಾನುವಾರ ನಡೆದ ಎಚ್. ಶಾಂತರಾಜ ಐತಾಳ್ ಅವರ ‘ಆಯುಬೊವಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಸ್ಯದ ಮೂಲಕ ವ್ಯಂಗ್ಯವಾಗಿ ಬದುಕಿನ […]