ದೋಸ್ತಿ ವಲಯದಲ್ಲಿ ಗಡಗಡ: ರೆಸಾರ್ಟ್‌ನತ್ತ ಬಿಜೆಪಿ ಶಾಸಕರು

ಬೆಂಗಳೂರು: ದೋಸ್ತಿ ಸರಕಾರದ  ರಾಜೀನಾಮೆ ಪರ್ವ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸರ್ಕಾರ ಪತನಗೊಳ್ಳುವ ಭೀತಿಯಲ್ಲಿದ್ದ ದೋಸ್ತಿ ಸರ್ಕಾರ ಸುಪ್ರೀಂ ಆದೇಶದ ಬೆನ್ನಲ್ಲೇ ವಿಶ್ವಾಸ ಮತ ಯಾಚನೆಯ ಚಿಂತನೆ ನಡೆಸಿದೆ.  ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನಗೊಳ್ಳುವ ಭೀತಿಯಲ್ಲಿತ್ತು. ಆದರೆ ಸ್ಪೀಕರ್ ನಡೆ ಅತೃಪ್ತ ಶಾಸಕರಿಗೆ ಕೊಂಚ ತಲೆನೋವು ನೀಡಿತ್ತು. ಒಂದೆಡೆ ರಾಜೀನಾಮೆ ಅಂಗೀಕಾರವಾಗದ ತಲೆನೋವಾದರೆ ಮತ್ತೊಂದೆಡೆ ಮನವೊಲಿಸಲು ಬಂದಿದ್ದ ನಾಯಕರನ್ನು ಎದುರಿಸಲಾಗದ ಪರಿಸ್ಥಿತಿ. ಹೀಗಿರುವಾಗ ಅತೃಪ್ತ ನಾಯಕರು ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. […]