ಆದಿ ಉಡುಪಿ ಪರಿಸರದಲ್ಲಿ ಹುಚ್ಚುನಾಯಿ ಕಡಿತ: ಸಾರ್ವಜನಿಕರಲ್ಲಿ ಆತಂಕದ ವಾತಾವರಣ

ಉಡುಪಿ: ಹುಚ್ಚು ನಾಯಿಯೊಂದು ಹಲವು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಆದಿಉಡುಪಿ ಪರಿಸರದಲ್ಲಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ತೀವ್ರ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದಿ ಉಡುಪಿ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಸಂದರ್ಭದ ಗಂಭೀರತೆಯನ್ನು ಅರಿತ ವಿಶು ಶೆಟ್ಟಿ ಅಂಬಲಪಾಡಿ, ಅಂಬಲಪಾಡಿ ಕೃಷ್ಣ ಹಾಗೂ ಸಂಗಡಿಗರು, ಹುಚ್ಚು ನಾಯಿಯಿಂದ ಬೇರೆ ಸಾರ್ವಜನಿಕರಿಗೆ ತೊಂದರೆ […]