ಹಸಿರುವಲಯದ ಜಿಲ್ಲೆಗಳಲ್ಲಿ ಮೇ 7ರಿಂದ ಡಿಎಲ್, ಎಲ್‌ಎಲ್ ಪರೀಕ್ಷೆ

ಬೆಂಗಳೂರು: ಹಸಿರು ವಲಯದ 14 ಜಿಲ್ಲೆಗಳಲ್ಲಿ ಮೇ 7ರಿಂದ ಚಾಲನಾ ಪರವಾನಗಿ (ಡಿ.ಎಲ್) ಹಾಗೂ ಕಲಿಕಾ ಪರವಾನಗಿ (ಎಲ್.ಎಲ್) ಪರೀಕ್ಷೆಗಳು ನಡೆಯಲಿದ್ದು, ಪ್ರತಿದಿನ ಶೇ 50 ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಡಿ.ಎಲ್ ಹಾಗೂ ಎಲ್.ಎಲ್ ಪರೀಕ್ಷೆ ನಡೆಯುವ ದಿನಾಂಕ ಹಾಗೂ ವಿವರಗಳನ್ನು ಆಭ್ಯರ್ಥಿಗಳ ಮೊಬೈಲ್‍ಗೆ ರವಾನಿಸಲಾಗಿದೆ. ಆನ್‍ಲೈನ್‌ನಲ್ಲಿ ಈಗಾಗಲೇ ನೋಂದಾಯಿಸಿ, ಪರೀಕ್ಷೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಕಚೇರಿಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, […]