ಡಿಕೆಶಿ ಬಿಡುಗಡೆಗೆ ಅಭಿಮಾನಿ ಬಳಗದಿಂದ ದೇವರಿಗೆ ಪ್ರಾರ್ಥನೆ

ಮಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಬಿಡುಗಡೆಗೆ ಪ್ರಾರ್ಥಿಸಿ ಡಿಕೆಶಿ ಅಭಿಮಾನಿ ಬಳಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹೋಮ ಹಾಗೂ ಪುತ್ತೂರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮನ್ಯು ಸೂಕ್ತ ಹೋಮ (ಮಣಿ ಸೂಕ್ತ ಹವನ) ನಡೆಯಿತು. ಬೆಳಿಗ್ಗೆ 10ರಿಂದ ಆರಂಭಗೊಂಡ ಹೋಮ 12.30ರ ವೇಳೆಗೆ ಪೂರ್ಣಾಹುತಿ ನಡೆಯಿತು. ನಾರಾಯಣ ಅಸ್ರಣ್ಣರ ನೇತೃತ್ವದಲ್ಲಿ ಹವನ ನಡೆಯಿತು. ಡಿಕೆಶಿ ಅವರ ಸಂಕಷ್ಟ ನಿವಾರಣೆಯಾಗಬೇಕು. ಅವರ ಆರೋಗ್ಯ ಸುಧಾರಣೆ ಆಗಬೇಕು. […]