ಡಿಜಿಟಲ್ ವಂಚನೆ ಮೇಲೆ ಗಧಾ ಪ್ರಹಾರ: ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆ ಕಡ್ಡಾಯ; ಬಲ್ಕ್ ಸಿಮ್ ಕನೆಕ್ಷನ್ ಸ್ಥಗಿತ
ನವದೆಹಲಿ: ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರವು ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬಲ್ಕ್ ಸಿಮ್ ‘ಕನೆಕ್ಷನ್’ಗಳನ್ನು ನೀಡುವ ನಿಬಂಧನೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ವೈಷ್ಣವ್, ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದ್ದಾರೆ. ಸಿಮ್ ಕಾರ್ಡ್ ಡೀಲರ್ ಪರಿಶೀಲನೆಯನ್ನು ‘ಪರವಾನಗಿದಾರ’ ಅಥವಾ ಸಂಬಂಧಪಟ್ಟ ಸಿಮ್ ಕಂಪನಿ ಮಾಡಲಿದೆ ಎಂದು ಸ್ಪಷ್ಟಪಡಿಸಿರುವ ಅವರು ಈ ಕಾನೂನಿನ […]