ಸಲೂನ್, ಬಟ್ಟೆ ಅಂಗಡಿಗಳಲ್ಲಿ ಜನ ಸೇರಿಸದಂತೆ ಉಡುಪಿ ಡಿಹೆಚ್‍ಓ ಎಚ್ಚರಿಕೆ:

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇರುವ ವಿವಿಧ ಹೇರ್ ಕಟ್ಟಿಂಗ್ ಶಾಪ್‍ಗಳು, ಬ್ಯೂಟಿಪಾರ್ಲರ್‍ಗಳು, ಸಾರಿ ಸೆಂಟರ್ಸ್ ಮತ್ತು ಇತರೆ ಹೆಚ್ಚು ಜನಸಂದಣಿ ಸೇರುವ ಅಂಗಡಿ ಮುಂಗಟ್ಟುಗಳು, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತವಾಗಿ ಜಿಲ್ಲಾಡಳಿತ ಸೂಚಿಸಿರುವ ಈ ಕೆಳಕಂಡ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಹೇರ್ ಕಟ್ಟಿಂಗ್ ಶಾಪ್‍ಗಳು ಮತ್ತು ಬ್ಯೂಟಿ ಪಾರ್ಲರ್‍ಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕವಾಗಿ ಬಟ್ಟೆಗಳನ್ನು ಉಪಯೋಗಿಸಬೇಕು. ತಮ್ಮಲ್ಲಿರುವ ಪೀಠೋಪಕರಣಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ವೈಯಕ್ತಿಕ […]