ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಹಣ ಸಂಗ್ರಹ: ಡಿ.29 ರಂದು ಉಡುಪಿ ತಾಲೂಕು ಕಚೇರಿ ಮುಂಭಾಗ ಬೃಹತ್ ಸಾಮೂಹಿಕ ಧರಣಿಗೆ ನಿರ್ಧಾರ
ಉಡುಪಿ: ಸುರತ್ಕಲ್ ಎನ್.ಐ.ಟಿ.ಕೆ ಬಳಿ ಇದ್ದ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳ್ಳುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಅಜ್ಜರಕಾಡಿನ ವಿಮಾ ನೌಕರರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದರು. ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟಗೊಂಡಿದ್ದು, ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ ನವಯುಗ ಸಂಸ್ಥೆಯು ಟೋಲ್ ಸಂಗ್ರಹಕ್ಕೆ […]