ಮುಂಬೈನ ಧಾರಾವಿಯ ಹುಡುಗ ಇದೀಗ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್: ಲೆಫ್ಟಿನೆಂಟ್ ಉಮೇಶ್ ಕೀಲು ಸಾಧನೆ ಯುವಕರಿಗೆ ಮಾದರಿ
ಮುಂಬೈ: ಪ್ರಪ್ರಂಚದ ಅತಿದೊಡ್ಡ ಸ್ಲಮ್ ಎನ್ನುವ ಕುಖ್ಯಾತಿ ಪಡೆದ ಧಾರಾವಿಯ(Dharavi) ಕಠಿಣ ಪರಿಸರದಲ್ಲಿ ಬೆಳೆದ ಲೆಫ್ಟಿನೆಂಟ್ ಉಮೇಶ್ ಕೀಲು ಇಂದು ಭಾರತೀಯ ಸೇನೆಯಲ್ಲಿ(Indian Army) ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದಾರೆ. ಸಯಾನ್ ಕೋಳಿವಾಡದ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಉಮೇಶ್, ಶನಿವಾರ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಧಾರಾವಿಯ 10* 5 ಅಡಿಯ ಮನೆಯಲ್ಲಿ ನಾಲ್ಕು ಜನರ ಪರಿವಾರದಿಂದ ಬಂದ ಉಮೇಶ್ ಕೀಲು ಎಲ್ಲ ಸಂಕಷ್ಟಗಳನ್ನು ಮೀರಿ […]