ಅ.11ರಂದು ದೇವರು ಬೇಕಾಗಿದ್ದಾರೆ ಕನ್ನಡ ಚಲನಚಿತ್ರ ತೆರೆಗೆ

ಉಡುಪಿ: ಹೊರಿಝೇನ್ ಮೂವೀಸ್ ಬ್ಯಾನರ್‌ನಡಿ ನಿರ್ಮಿಸಲಾದ ‘ದೇವರು ಬೇಕಾಗಿದ್ದಾರೆ’ ಕನ್ನಡ ಚಲನಚಿತ್ರ ಅ. 11ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೇಂಜ ಚೇತನ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚಿತ್ರವನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಇದಕ್ಕೆ 16 ಮಂದಿ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಕೋಲಾರ ಗುಡಿಬಂಡೆ, ಕೈವಾರ ವ್ಯಾಪ್ತಿಯಲ್ಲಿ 30 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು, ತನಗೆ ಬುದ್ಧಿ ಬಂದ […]