ಹೆಚ್ಚುತ್ತಿರುವ ಡೆಂಘೀ.. ಇದುವೆರೆಗೆ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ

ತಿರುವನಂತಪುರಂ: ಕಾಸರಗೋಡು ಜಿಲ್ಲೆಯ ಚೆಮ್ಮನಾಡು ಮೂಲದ ಅಶ್ವತಿ (28) ಜ್ವರದಿಂದ ಸಾವನ್ನಪ್ಪಿದವರು. ಈ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ವರ್ಷದ ಮಗು ಇರುವ ಈ ಮಹಿಳೆ ಜ್ವರದಿಂದ ಸಾವನ್ನಪ್ಪಿರುವುದು ಇಂದು ಬೆಳಗ್ಗೆ ದೃಢಪಟ್ಟಿದೆಕೇರಳದಲ್ಲಿ ಜ್ವರ ಬಾಧಿತರು ಹಾಗೂ ಜ್ವರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ವೆಬ್‌ಸೈಟ್​ನಲ್ಲಿ ಕೊನೆಯದಾಗಿ ಜೂನ್​ 27 ರಂದು ಜ್ವರ ಬಾಧಿತರು ಹಾಗೂ ಸಾವನ್ನಪ್ಪಿದವರ ಅಂಕಿ ಅಂಶ ಪ್ರಕಟವಾಗಿತ್ತು. . […]