ಅಗ್ನಿಪಥ್ ಯೋಜನೆ: ಈ ವರ್ಷಕ್ಕೆ ಗರಿಷ್ಠ ವಯಸ್ಸಿನ ಮಿತಿ 23 ಕ್ಕೆ ಏರಿಕೆ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಸೇನೆಯ ಸೇವೆಗಳಿಗೆ ಯಾವುದೇ ನೇಮಕಾತಿ ನಡೆದಿಲ್ಲವಾದ್ದರಿಂದ ಈ ವರ್ಷ ಯೋಜನೆಯ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ಕೇಂದ್ರ ರಕ್ಷಣಾ ಸಚಿವಾಲಯವು ಘೋಷಿಸಿದ್ದು, ಈಗ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸನ್ನು 21 ರಿಂದ 23 ಕ್ಕೆ ಏರಿಸಲಾಗಿದೆ. ನೇಮಕಾತಿ ಸ್ಥಗಿತಗೊಂಡಿದ್ದಾಗ, 2020 ರಲ್ಲಿ 21 ವರ್ಷ ವಯಸ್ಸು ಪೂರ್ತಿಗೊಳಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಈ ವರ್ಷಕ್ಕೆ ಮಾತ್ರ ಅರ್ಹರಾಗಲು ಅವಕಾಶ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಂಗಳವಾರ ಘೋಷಿಸಲಾದ ಮೂಲ […]

18 ತಿಂಗಳ ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ರಕ್ಷಿಸಿದ ಭಾರತೀಯ ಸೇನೆ

ಗುಜರಾತ್: ಗೋಲ್ಡನ್ ಕಟಾರ್ ಆರ್ಟಿಲರಿ ಬ್ರಿಗೇಡ್‌ನ ಕ್ಯಾಪ್ಟನ್ ಸೌರಭ್ ಮತ್ತು ಅವರ ತಂಡವು ಗುಜರಾತಿನ ಸುರೇಂದ್ರ ನಗರದಲ್ಲಿ 300 ಅಡಿ ಆಳದ ಕೊಳವೆ ಬಾವಿಯಿಂದ 18 ತಿಂಗಳ ಮಗು ಶಿವಂನನ್ನು ಸುರಕ್ಷಿತವಾಗಿ ರಕ್ಷಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ತನ್ನ ಅಚಲವಾದ ಬದ್ಧತೆಗೆ ಮತ್ತೊಂದು ಪುರಾವೆಯನ್ನು ನೀಡುತ್ತಾ, ಭಾರತೀಯ ಸೇನೆಯು ಸುರೇಂದ್ರನಗರದ ಧರಂಗಧರ ತಾಲೂಕಿನ ದುದಾಪುರ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 18 ತಿಂಗಳ ಮಗುವನ್ನು ರಕ್ಷಿಸಿದೆ. ಮಂಗಳವಾರ ತಡರಾತ್ರಿ ಮಗು […]