ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ

ಉಡುಪಿ: ಶ್ರೀಕೃಷ್ಣಮಠದ ಕನಕಗೋಪುರದ ಮುಂಭಾಗದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥಸ್ವಾಮೀಜಿ ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಬಲೀಂದ್ರ ಪೂಜೆ, ಧನಲಕ್ಷ್ಮೀ ಪೂಜೆ, ವ್ಯೋಮ ದೀಪ ವಿಶೇಷವಾಗಿ ನೆರವೇರಿತು.

ಸತ್ಯನಾಥ ಸ್ಟೋರ್ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ದೀಪಾವಳಿ ಧಮಾಕ ವಿಶೇಷ ಆಫರ್!!

ಉಡುಪಿ : ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಮದುವೆ ಜವಳಿಗೆಂದೇ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ ನ ಎಲ್ಲಾ ಮಳಿಗೆಯಲ್ಲಿ ದೀಪಾವಳಿ ಧಮಾಕ ವಿಶೇಷ ಆಫರ್ ಆರಂಭಗೊಂಡಿದೆ. ನ. 5 ರಿಂದ ಸತ್ಯನಾಥ ಸ್ಟೋರ್ ನ ಎಲ್ಲಾ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಿವಿಧ ಬಗೆಯ ಮನ ಒಪ್ಪುವ ವಸ್ತ್ರಗಳಿಗೆ ವಿಶೇಷ ಕೊಡುಗೆಯಾಗಿ ಡಿಸ್ಕೌಂಟ್ ಘೋಷಿಸಿದೆ. ಎಲ್ಲಾ ವರ್ಗದ ಜನರ ವಸ್ತ್ರಗಳ ವಿಪುಲ ಸಂಗ್ರಹ ಒಂದೇ ಸೂರಿನಡಿ ಲಭ್ಯವಿದ್ದು, ಗ್ರಾಹಕರು ಈ ವಿಶೇಷ ರಿಯಾಯತಿಯ ದರ ಕಡಿತದ […]

ನ.12-13 ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ

ನ.1 ರಂದು ಸಂಕಷ್ಟ ಹರ ಚತುರ್ಥಿ, ನವೆಂಬರ 9 ರಂದು ಏಕಾದಶಿ, ನೀರು ತುಂಬುವ ಹಬ್ಬ ನರಕಚತುರ್ದಶಿ ನ.11, ದೀಪಾವಳಿ ಧನಲಕ್ಷ್ಮಿ ಪೂಜೆ ನ. 12, ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ನ.13, ದ್ವಾದಶಿ ತುಳಸೀ ಪೂಜೆ ನ. 24. ನವೆಂಬರ್ 13 ಸೋಮವಾರ ಅಮಾವಾಸ್ಯೆ ಮಧ್ಯಾಹ್ನ 2.30ವರೆಗೆ ಇರುತ್ತದೆ. ಮಾಹಿತಿ: ಮೊಗೇರಿ ಪಂಚಾಗ

ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಪಟಾಕಿ ಮಳಿಗೆ ತೆರೆಯಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸೂಕ್ತ ಸ್ಥಳವನ್ನು ಗುರುತಿಸಿ, ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚಿಸಿದರು. ಅವರು ಇತ್ತೀಚೆಗೆ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು […]

ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಆಚರಣೆ

ಮಂಗಳೂರು: ‘ಕತ್ತಲೆಯಿಂದ ಬೆಳಕಿನಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ದೀಪಾವಳಿಯ ವಿಶೇಷ. ಆ ಮೂಲಕ ನಮ್ಮಲ್ಲಿ ಪ್ರೀತಿ, ವಿಶ್ವಾಸ ಸೌಹಾರ್ದ ಬೆಳೆಯಬೇಕು. ದೀಪಾವಳಿಯು ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿಎಕ್ಸ್ಪೋಡಿಯಂ ಸಭಾಂಗಣದಲ್ಲಿ ನಡೆದ ದೀಪಾವಳಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೀಪಾವಳಿಯ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಆಧ್ಯಾತ್ಮಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಲೌಕಿಕ ಮತ್ತು ಅಲೌಕಿಕ ಭಾವವನ್ನು […]