ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ : ಪತ್ನಿಗೆ ಕಣ್ಣೀರಿನ ಮೂಲಕ ವಿದಾಯ ಹೇಳಿದ ವಿಜಯ ರಾಘವೇಂದ್ರ

ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ. ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೊಳಗಾಗಿ ಸ್ಪಂದನಾ ಕೊನೆಯುಸಿರೆಳೆದ ಸುದ್ದಿ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರ ಆಘಾತಕ್ಕೆ ಕಾರಣವಾಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ಪಾರ್ಥಿವ ಶರೀರವನ್ನು ಬ್ಯಾಂಕಾಕ್ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಮಲ್ಲೇಶ್ವರಂನ ನಿವಾಸದಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಸ್ಪಂದನಾ ಲೀನರಾಗಿದ್ದಾರೆ.ಇಂದು ಸಂಜೆ 5 ಗಂಟೆಗೆ ವಿಜಯ್ ರಾಘವೇಂದ್ರ ಅವರ ಪತ್ನಿ […]