ಸಾಲಿಗ್ರಾಮದಲ್ಲಿ ಸ್ಕೂಟರ್ ಗೆ ಬಸ್ ಢಿಕ್ಕಿ‌; ಸವಾರ ಸಾವು

ಕುಂದಾಪುರ: ಬಸ್ಸೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಡೆದಿದೆ. ಮೃತರನ್ನು ಬನ್ನಾಡಿ ಗ್ರಾಮದ ಬಡಾಬೆಟ್ಟು ಉಪ್ಲಾಡಿ ನಿವಾಸಿ 56 ವರ್ಷದ ಶೀನ ಪೂಜಾರಿ ಎಂದು ಗುರುತಿಸಲಾಗಿದೆ. ಮೇ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇವರ ಸ್ಕೂಟರ್‌ಗೆ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಇದರಿಂದಾಗಿ  ಸ್ಕೂಟರ್  ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶೀನ ಪೂಜಾರಿ, […]

ಅತಿಯಾದ ಮದ್ಯ ಸೇವನೆ ವ್ಯಕ್ತಿ ಸಾವು

ಕುಂದಾಪುರ: ಅಂಪಾರು ಗ್ರಾಮದಲ್ಲಿ ಅತಿಯಾದ ಮದ್ಯ ಸೇವನೆಯಿಂದ ಹಠಾತ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿ ಮೇ. 6 ರಂದು ಸಂಜೆ ನಡೆದಿದೆ. ಮೃತರನ್ನು ಅಂಪಾರು ಗ್ರಾಮದ ನಿವಾಸಿ 40 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಅತಿಯಾದ ಮದ್ಯಪಾನ ಹಾಗೂ ಸರಿಯಾಗಿ ಆಹಾರ ಸೇವನೆ ಮಾಡದೆ ದೈಹಿಕವಾಗಿ ಬಳಲಿದ್ದರು. ಇದೇ ಕಾರಣದಿಂದ ಮೇ. 6 ರಂದು ಸಂಜೆ ಹಠಾತ್ ಆಗಿ ಮೃತಪಟ್ಟಿದ್ಧಾರೆ. ಈ ಸಂಬಂಧ […]

ಸಾಣೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ‌; ಗಾಯಾಳು ವೃದ್ಧೆ ಸಾವು

ಕಾರ್ಕಳ: ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸಾಣೂರು ಗ್ರಾಮದ ನಿವಾಸಿ 71 ವರ್ಷದ ಸುಮತಿ ಶೆಟ್ಟಿ ಮೃತ ದುರ್ದೈವಿ. ಇವರು ಏ.4ರಂದು ಬೆಳಿಗ್ಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಓಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಯ ಸೆರಗಿಗೆ ಬೆಂಕಿ ತಗಲಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ […]

ಗಂಡ ಹೆಂಡತಿ ಜಗಳ ಸಾವಿನಲ್ಲಿ‌ ಅಂತ್ಯ

ಕುಕ್ಕುಂದೂರು: ಗಂಡ ಹೆಂಡತಿಯ ಜಗಳವು ಹೆಂಡತಿಯ ಸಾವಿನಲ್ಲಿ ಅಂತ್ಯ ಕಂಡ ದಾರುಣ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಮೇ 3 ರಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಜೋಡುರಸ್ತೆಯ 28 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಇವರ ಪತಿ ಲೋಕೇಶ್ ಎಂಬವರು ನಿನ್ನೆ ಬೆಳಿಗ್ಗೆ ಮದ್ಯಪಾನ ಮಾಡಿಕೊಂಡು ಬಂದು ಶೋಭಾ ಅವರ ಬಳಿ ಜಗಳವಾಡಿದ್ದರು. ಇದರಿಂದ ಮನನೊಂದ ಶೋಭಾ ಮನೆಯ ಕೋಣೆಗೆ ತೆರಳಿ ಚಿಲಕ ಹಾಕಿಕೊಂಡು ಮಾಡಿನ ಶೀಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ […]

ರಸ್ತೆ ಅಪಘಾತ: ಚಿಕಿತ್ಸೆ ಫಲಿಸದೆ ಸವಾರ ಮೃತ್ಯು

ಕಾರ್ಕಳ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಕಾರ್ಕಳ ರೆಂಜಾಳ ನಿವಾಸಿ 63 ವರ್ಷದ ಅಜಿತ್ ಕುಮಾರ್ ಮೃತ ಬೈಕ್ ಸವಾರ. ಇವರು ಮೇ 2ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಕಸಬಾ ಗ್ರಾಮದ ಗ್ಯಾಸ್ ಗೋಡೌನ್ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಒಮ್ಮೇಲೆ ಬ್ರೇಕ್ ಹಾಕಿದ್ದರು‌. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಅಜಿತ್ ಗಂಭೀರ ಗಾಯಗೊಂಡಿದ್ದರು. […]