ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಅಪ್ಪಳಿಸಿದ ನಾಸಾ: ವಿಚಲನ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

ವಿಚಲನ ತಂತ್ರಜ್ಞಾನವನ್ನು ಪರೀಕ್ಷಿಸಲು ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಉಡಾವಣೆಯಾದ ವೆಂಡಿಂಗ್ ಮೆಷಿನ್-ಗಾತ್ರದ ಬಾಹ್ಯಾಕಾಶ ನೌಕೆ ಡಾರ್ಟ್ (DART) ಫುಟ್‌ಬಾಲ್ ಮೈದಾನದ ಗಾತ್ರದ ಕ್ಷುದ್ರಗ್ರಹ ಡೈಮಾರ್ಫಾಸ್‌ ನತ್ತ ಪ್ರಯಾಣಿಸಿದೆ ಮತ್ತು ಅದಕ್ಕೆ ಡಿಕ್ಕಿ ಹೊಡೆದಿದೆ ಮತ್ತು ಅದನ್ನು ಪಥದಿಂದ ಹೊರಕ್ಕೆ ತಳ್ಳಿದೆ. ಬಾಹ್ಯಾಕಾಶದಲ್ಲಿ 10 ತಿಂಗಳ ಹಾರಾಟದ ನಂತರ, ನಾಸಾ ದ ಡಬಲ್ ಆಸ್ಟ್ರಾಯಿಡ್ ರಿ-ಡೈರೆಕ್ಷನ್ ಟೆಸ್ಟ್ (ಡಾರ್ಟ್), ವಿಶ್ವದ ಮೊದಲ ಗ್ರಹಗಳ ರಕ್ಷಣಾ ತಂತ್ರಜ್ಞಾನ ಪ್ರದರ್ಶನವು ಸೋಮವಾರ […]