ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು
ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]