ದೈವ-ಕೋಲದ ವಿಚಾರದಲ್ಲಿ ತಡೆಯಾಜ್ಞೆ ತಂದ ವ್ಯಕ್ತಿ ದೈವದೆದುರೇ ಕುಸಿದು ಸಾವು: ಪಡುಹಿತ್ಲುವಿನಲ್ಲಿ ವಿಚಿತ್ರ ವಿದ್ಯಮಾನ

ಪಡುಬಿದ್ರೆ: ಇಲ್ಲಿನ ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ಜಾರಂದಾಯ ಬಂಟ ಸೇವಾ ಸಮಿತಿಯ ನೇತೃತ್ವದಲ್ಲಿ ನೇಮೋತ್ಸವವು ವರ್ಷಂಪ್ರತಿ ನಡೆಯುತ್ತಿದ್ದು, ಇದೀಗ ಇಲ್ಲಿ ವಿಚಿತ್ರವೆನಿಸುವಂತಹ ಘಟನೆ ನಡೆದಿದೆ. ದೈವಸ್ಥಾನದ ಉಸ್ತುವಾರಿಯು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿಯದ್ದಾಗಿದ್ದು, ಈ ಹಿಂದೆ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಆದರೆ ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅಧಿಕಾರ ಕಳೆದುಕೊಂಡರು. ಹಾಗಂತ ಸುಮ್ಮನಿರದ ಪ್ರಕಾಶ್ ಶೆಟ್ಟಿ 9 ಜನರ ಪ್ರತ್ಯೇಕ ಟ್ರಸ್ಟ್ ರಚಿಸಿ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ […]