5ಜಿ ಅಪ್ಡೇಟ್ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ಕಳ್ಳರು: ಎಚ್ಚರಿಕೆಯಿಂದಿರುವಂತೆ ಪೊಲೀಸರ ಸೂಚನೆ

ಮಂಗಳೂರು/ಉಡುಪಿ: ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಈಗಾಗಲೆ ಬಿಡುಗಡೆಯಾಗಿದ್ದು, ಮುಂದಿನ ವರ್ಷಾಂತ್ಯದೊಳಗೆ ದೇಶಾದ್ಯಂತ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಹ್ಯಾಕರ್ ಗಳ ಗುಂಪು ಸಕ್ರಿಯವಾಗಿದ್ದು, ಇದನ್ನೇ ನೆಪವಾಗಿಸಿಕೊಂಡು ಗ್ರಾಹರನ್ನು ಮೋಸದ ಜಾಲದೊಳಗೆ ಸಿಲುಕಿಸಿ, ಹಣ ದೋಚುವ ಕೆಲಸಕ್ಕೆ ಕೈ ಹಾಕಲಿದ್ದಾರೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಗ್ರಾಹಕರಿಗೆ ಕರೆ ಅಥವಾ ಸಂದೇಶಗಳ ಮೂಲಕ ಫೋನ್ ಅನ್ನು 4ಜಿ ಯಿಂದ 5ಜಿ ಗೆ ಅಪ್ಡೇಟ್ ಮಾಡುತ್ತೇವೆಂದು ಒಟಿಪಿ ಕೇಳುವ ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿಗಳನ್ನು […]