ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ನಿನಾದ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಸಂಚಿಕೆ-5 ಅನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಲಿಂಗಪ್ಪ ಮತ್ತು ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಶ್ವತ್ ಎಸ್. ಎಲ್ ಮಾತನಾಡಿ ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ, ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟಲು ಕ್ರಿಯೇಟಿವ್ ಎಂದಿಗೂ ಸಿದ್ಧವಾಗಿದೆ. […]
ತ್ರಿಶಾ ಹಾಗೂ ಕ್ರಿಯೇಟಿವ್ ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ; ಮೊಸರು ಕುಡಿಕೆ ಉತ್ಸವ
ಉಡುಪಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ‘ಕ್ರಿಯೇಟಿವ್ ಗುರು ದೇವೋಭವ’ ಕಾರ್ಯಕ್ರಮವನ್ನು ಸೆ.07ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಮೃತ ರೈ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪರ್ಯಂತ ತನ್ನ ಜೀವನೋಪಾಯಕ್ಕೆ ಮಾರ್ಗದರ್ಶನವನ್ನು ನೀಡಿರುವ ಸಮಾಜದಲ್ಲಿ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಾಗುವುದು ನಮ್ಮತನವಾಗಬೇಕೆ ಹೊರತು ಬೀಗುವುದರಿಂದ ನಮಗೇನು ಸಿಗಲಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ […]
ಕಾರ್ಕಳ: ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರ
ದಿನಾಂಕ : ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಜು.17 ಮತ್ತು19 ರಂದು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್ ರಾಜ್ ಗಣೇಶ್ ಕಾಮತ್ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್ ಅಕೌಂಟ್ ಕೋರ್ಸ್ ಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ಕಾಲೇಜಿನಲ್ಲಿ ಒದಗಿಸುವ ಈ ಕೋರ್ಸ್ ಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದರು. ಖ್ಯಾತ ಕಂಪೆನಿ ಸೆಕ್ರೆಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೆಟರಿ ಕಾರ್ಯವೈಖರಿ […]
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಪರೀಕ್ಷೆ: ಕ್ರಿಯೇಟಿವ್ ಪ.ಪೂ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆ
ಕಾರ್ಕಳ: Institute of Company Secretary of India ಮೇ 6 ರಂದು ನಡೆಸಿದ ಅತ್ಯಂತ ಕಠಿಣ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ ಅಶೋಕ್, ಅನಘ, ಅನಿರುದ್ಧ್, ದ್ರುವ ಕೆ.ಜಿ, ಅವನೀಶ್ ದೇವಾಡಿಗ, ಓಂಕಾರ್ ಪ್ರಕಾಶ್ ಹೆಗಡೆಯಾಲ್, ಧೃತಿ ಡಿ. ಶೆಟ್ಟಿ, ಕಾನಂಗಿ ಸಮೀಕ್ಷಾ ಹೆಗ್ಡೆ, ಪಾಟೀಲ್ ಶ್ರಾವಣಿ ಅರವಿಂದ್, ವಿಸ್ಮಯ ಹೆಚ್.ಎಸ್ ಮತ್ತು ಧೃತಿ ಆರ್.ಎನ್ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಒಟ್ಟು 14 […]
ಕಾರ್ಕಳ: ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಅತ್ಯುತ್ತಮ ಸಾಧನೆ
ಕಾರ್ಕಳ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಎಪ್ರಿಲ್ ತಿಂಗಳಿನಲ್ಲಿ ನಡೆಸಿದ ಎರಡನೇ ಹಂತದ ಜೆ.ಇ.ಇ ಮೈನ್ ಎರಡನೇ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ರಾಷ್ಟ್ರ ಮಟ್ಟದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ಉದ್ಭವ್ ಎಂ. ಆರ್. ಆಲ್ ಇಂಡಿಯಾ ರ‍್ಯಾಂಕಿಂಗ್ ಕ್ಯಾಟಗರಿ ವಿಭಾಗದಲ್ಲಿ 152 ನೇ ರ‍್ಯಾಂಕ್, ಜಾಗೃತಿ ಕೆ ಪಿ 158 ನೇ ರ‍್ಯಾಂಕ್ ಗಳಿಸಿದ್ದಾರೆ. ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್‌ನೊಂದಿಗೆ ಒಟ್ಟು 98.4035 ಪರ್ಸಂಟೈಲ್ ಗಳಿಸಿದ್ದಾರೆ. ಉದ್ಭವ್ ಎಂ. […]